ಸೋಮವಾರ, ಡಿಸೆಂಬರ್ 14, 2015

ಕ್ಷಣಿಕ




ಕಾಲೇಜ್ನಲ್ಲಿ ಇರೋವಾಗ ಅಪ್ಪ ಕಳ್ಸೋ ಪಾಕೆಟ್ ಮನಿಯಲ್ಲಿ ಎಸ್ಟೊಂದು ಸಂತೋಷವಾಗಿ ಇರ್ತಾ ಇದ್ವಿ ಆಲ್ವಾ? ಸುಮ್ನೆ ಕೂತು ಯೋಚನೆ ಮಾಡಿದ್ರೆ , ನಾವು ಸಾಮಾಜಿಕವಾಗಿ, ಆರ್ಥಿಕವಾಗಿ  , ಬೆಳೆದಿರ್ಬೋದು  ಆದ್ರೆ ಜೀವನದ ಆ ದಿನಗಳನ್ನ  ತುಂಬ ಮಿಸ್ ಮಾಡ್ಕೋತಾ ಇದೀನಿ ಅನ್ಸತ್ತೆ . ಚಿಕ್ಕ ಪುಟ್ಟ ಸಂತೋಷಗಳೇ  ಮನುಷ್ಯನ್ನ ಫ್ರೆಶ್ ಆಗಿರ್ಸೋದು.

ನಿನ್ನೆ ರಾತ್ರಿ ಸುಮಾರು 11:30 ಕ್ಕೆ ಆಫೀಸ್ ನಿಂದ ಬಂದಿರ್ಬೊದು, ತುಂಬಾನೇ ಸುಸ್ತಾಗಿತ್ತು , ಆದರೂ ಸುಮ್ನೆ 5 ನಿಮಿಷ ಅಂತ ಈ ಇಂಟರ್ನೆಟ್ ಅನ್ನೋ ಬಲೆ ಮುಂದೆ ಕೂತವನಿಗೆ ಈ ಥರದ ಯೋಚನೆ   ಶುರುವಾಯ್ತು. ಹೀಗೆ ಒಂದು ವಾರದ ಹಿಂದೆ ಯೋಚನೆ ಮಾಡಿದಾಗ ೩-೪ ವರ್ಷದ ಹಿಂದೆ ಶುರು ಮಾಡಿದ್ದ ಬ್ಲಾಗ್ ಗೆ ಮರು ಜೀವ ಕೊಡೊ ಯೋಚನೆ ಬಂದಿದ್ದು . ಆದ್ರೆ ಬರೆಯೋಣ ಅನ್ನೋಕ್ಕೆ ಟೈಮ್ ಬೇಕಲ್ಲ ಸ್ವಾಮಿ.. ಆದ್ರೆ ಈ ವೀಕೆಂಡ್ ನಲ್ಲಿ ಏನಾದ್ರು ಬರಿಲೇಬೇಕು ಅಂತ ಡಿಸೈಡ್ ಅಂತು ಮಾಡ್ದೆ.


ಈ ಮಾಯಾವಿ ಇಂಟರ್ನೆಟ್ ಎಂಬ ಬಲೆಯಿಂದ ತಪ್ಪಿಸ್ಕೊಂಡು  ಮಲಗಿದ್ದಾಗ, ಪೇಪರ್ ಹುಡ್ಗಾ  ದಿನಪತ್ರಿಕೆ  ಎಸೆದ ಅಸ್ಪಷ್ಟ  ನೆನಪು.. ಕಣ್ಣು ಬಿಟ್ಟಾಗ ಬರೋಬ್ಬರಿ ಮದ್ಯಾಹ್ನ ೧ ಘಂಟೆ, ಮದ್ಯಹ್ನ ೧:೩೦ ಕ್ಕೆ ತಿಂಡಿ! ತಿಂದಾಗ ನೆನಪಾಯ್ತು  ರಾತ್ರಿ ಮಾಡಿದ ಶಪಥ, ಸರಿ ಬರೆಯೋಣ ಬಿಡು ಅಂತ ಸಿಸ್ಟಂ  ಮುಂದೆ ಕೂತವನಿಗೆ ಗೆಳೆಯನ ಫೋನ್ ಕರೆ  ಶಾಕ್ ಕೊಡತ್ತೆ ಅನ್ಕೊಂಡಿರ್ಲಿಲ್ಲ."ಮಗಾ ನಿಂಗೆ ಹೇಳ್ತಾ ಇದ್ದ್ದೆ ಅಲ್ವ ಅವ್ಳು ಆತ್ಮಹತ್ಯೆ ಮಾಡ್ಕೊಂಡ್ಲಂತೆ  ಕಣೋ' ನಂಗೆ ಗೊತ್ತಿರೋ ಹಾಗೆ  ಆ ಹುಡುಗಿಗೆ  ವಯಸ್ಸು ೧೭ ಸ್ಥಿಥಿವಂಥ ಅಪ್ಪ ಅಮ್ಮ ಆದ್ರೂ  ಯಾಕೆ ನಮ್ಮ ಯುವಜನತೆ ಆತ್ಮಹತ್ಯೆ ಮಾಡ್ಕೊತಾರೆ? ಯಾಕೆ ಆಯ್ತು. ಏನಿರಬಹುದು ಕಾರಣ?


ಪ್ರೀತಿ?... ಹಾಳಾದ್ದು ಲವ್ ?(ಕ್ಷಮೆ ಇರಲಿ!) ಪ್ರೀತಿ ಮನುಷ್ಯನ ಜೀವಾ ತಗೊಂಡು  ಬಿಡತ್ತಾ? ಸ್ಟುಪಿಡ್   ಅನ್ಸಲ್ವಾ?




ನನ್ನ ಪ್ರಕಾರ ಒಮ್ಮೆ ಪ್ರೀತಿ ಮಾಡಿ, ಬ್ರೇಕ್ ಅಪ್   ಆಗಿ ಹೊರ ಬರವ್ರು ಯಾರೂ ಸ್ಯುಸೈಡ್    ಮಾಡ್ಕೊಳಲ್ಲ. ಅವ್ರಿಗೆ ಜೀವನ ಅಂದ್ರೆ ಏನು ಅಂತ ಅರ್ಥ ಆಗ್ಬಿಟ್ಟಿರತ್ತೆ ಅಂತಾ ಎಂದೋ ಕೇಳಿದ ಮಾತು. "ಲವ್ನಲಿ ಸೋತವರು ಜಗತ್ತನ್ನೇ ಗೆಲ್ಲಬಲ್ಲವರಾಗ್ತಾರೆ" ಎಸ್ಟೊಂದು ಒಳ್ಳೆ ವಿಚಾರ ಅಲ್ವ? ಆದ್ರೆ ಅವನೋ ಅವಳೋ ಬಿಟ್ಟು ಹೋದ್ಲಲ್ಲಾ   ಎನ್ನೋ ಏಕಾಂತದಲ್ಲಿ ಆ ಒಂಟಿತನ ತಡೆಯೋಕಾಗಲ್ಲ ಅಂತ ಇನ್ನೊಂದು ಅಫೇರ್ ಕಡೆ ಕೈಚಾಚಿ ಬಿಡ್ತಾರೆ. ರವಿ ಬೆಳೆಗೆರೆ ಹೇಳೋ ಪ್ರಕಾರ ಇದಕ್ಕಿಂತ ಅಪಾಯಕಾರಿ ಮತ್ತೊಂದಿಲ್ಲ.

ಯೋಚನೆ ಮಾಡಿ ನೋಡಿ ಆ ಮೊದಲ ಪ್ರೀತಿಯಲ್ಲಿ ಇದ್ದ ಓರೆನೋಟ. ಆಕೆಯ ಮಾತಿಗೆ, ಆಕೆಯ ಕನ್ಸೆಳೆತಕ್ಕೆ ಒಹ್ ಅದೆಲ್ಲ ಬಿಡಿ ಮುಖ್ಯವಾಗಿ ನಮಗೆ ಒಂದು ಆಯ್ಕೆ ಅಂತ ಇರತ್ತೆ ಅಲ್ವ ? ಅವನ ಬುದ್ದಿವಂತಿಗೆ, ಮಾತುಗಾರಿಕೆ, ಅಂದ,   ಎಲ್ಲಾ  ನೋಡಿ ಯೋಚನೆ ಮಾಡಿ ಈ ಸಂಬಂಧ ಸ್ತಿರಕಾಲ ಉಳಿಯತ್ತೋ ಇಲ್ವೋ  ಅಂತ ಅಳೆದು ತೂಗಿ ಆ ಪ್ರೋಪೋಸಲ್ಗೆ ಒಪ್ಗೊಂಡಿರ್ತಿವಿ.
ಅವನ ಜೊತೆ ಜೀವನ ಹಂಚ್ಕೋಬೇಕು ಅಂತ ಕನಸು ಕಂಡವರಿಗೆ ಆ ಬಾಂಧವ್ಯ ಬಿಟ್ಟು ಹೋದಾಗ ಆಘಾತ ಸಹಜಾನೆ ಅದರಿಂದ ಹೊರಗೆ ಬರೋಕೆ ಟ್ರೈ  ಮಾಡಬೇಕು ಅದನ್ನು ಬಿಟ್ಟು ಅದೇ ಆಘಾತದಲ್ಲಿ ಉಂಟಾಗೋ ಕಂಪ್ಯುಶನ್ನ್ನಲ್ಲಿ ನಿಮಗೆ ಗೊತ್ತಿಲ್ಲದೇ ನೀವೊಂದು ಆಫ್ಫೈರ್ ಕಡೆ ಕೈಚಾಚಿರ್ತಿರ   , ಅವಸರಕ್ಕೆ ಬಿದ್ದು ಬಿಡ್ತೀವಿ. ಮುಳುಗೊವ್ನಿಗೆ ಹುಲ್ಲು ಕಡ್ಡಿನೆe   ಆಸರೆ ಅನ್ನೋ ಹಾಗೆ ಆಗ್ಬಿಟ್ಟಿರತ್ತೆ ಜೀವನ , ಅದಕ್ಕೋಸ್ಕರ ಇಂಥ ಸ್ಥಿತಿಯಲ್ಲಿ ಮಾಡ್ಕೊಳ್ಳೋ ಆಯ್ಕೆ ಆರೋಗ್ಯಕರವಾಗಿ, ಲಾಜಿಕಲ್ ಆಗಿ ಇರೋದಿಲ್ಲ ವ್ರಥಾ ಅವಸರ ಪಡಬೇಡಿ, ಬಿಟ್ಟು ಹೋದವರ ಕಡೆಗಿನ ಕೋಪದ ತಾಪಕ್ಕೊಸ್ಕರ ನಿಮ್ಮ ಅಭಿರುಚಿಗೆ ಹೊಂದಿಕೊಳ್ಳದೆ  ಇರುವವರನ್ನ ಆಯ್ಕೆ ಮಾಡಿಕೊಂಡು ಜೀವನ  ಪರ್ಯಂತ ನರಳಬೇಡಿ. ಹಾಗಂತ ಆತ್ಹ್ಮಹತ್ಯೇನೆ ಪರಿಹಾರ ಕೂಡ ಅಲ್ಲ.

ನಮಗಿರೋದು ಒಂದೇ ಜೀವನ, ಆದಸ್ಟು ತಾಳ್ಮೆ ಇರಲಿ. 


ಶುಭದಿನ.